ಯೋಜನೆಯಲ್ಲಿ ಭಾಗವಹಿಸುವಿಕೆಯ ಹೇಳಿಕೆ

ಲೈಂಗಿಕ ದೌರ್ಜನ್ಯ ಪತ್ತೆ: ಸಂಶೋಧನಾ ಅಭಿವೃದ್ಧಿ ಯೋಜನೆ

ಅನಿಮಾ ನೋ ಯುವರ್‌ಸೆಲ್ಫ್ ಕಂಪೆನಿ ಲಿಮಿಟೆಡ್ (Anima Know Yourself Company Ltd.) ಮತ್ತು ಹೈಫಾ ವಿಶ್ವವಿದ್ಯಾಲಯದ ಎಮಿಲಿ ಸಾಗೋಲ್ ಸಂಶೋಧನಾ ಕೇಂದ್ರವು (Emili Sagol Research Center at the University of Haifa) ಗಣಕೀಕೃತ ಕೃತಕ ಬುದ್ಧಿಶಕ್ತಿಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಸ್ವಯಂ-ಚಿತ್ರಕಲೆಗಳ ಮೂಲಕ ಲೈಂಗಿಕ ದೌರ್ಜನ್ಯವನ್ನು ಕಂಡುಹಿಡಿಯುವ ಗುರಿಯನ್ನು ಹೊಂದಿದೆ.

ಲೈಂಗಿಕ ದೌರ್ಜನ್ಯವು ವಿಶ್ವದಾದ್ಯಂತ ನಡೆಯುತ್ತಿರುವ ಸಂಗತಿಯಾಗಿದ್ದು ತೀವ್ರವಾದ ದೀರ್ಘಾವಧಿಯ ಮಾನಸಿಕ ಮತ್ತು ದೈಹಿಕ ಪರಿಣಾಮಗಳ ಜೊತೆಗೆ ಖಿನ್ನತೆ, ಆತಂಕ, ವ್ಯಸನ, ಸ್ವಯಂ ಹಾನಿ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಉಂಟುಮಾಡುತ್ತದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ತಮ್ಮ ಅನುಭವವನ್ನು ಸಾಮಾನ್ಯವಾಗಿ ಬಹಿರಂಗಪಡಿಸಲು ಹಿಂಜರಿಯುತ್ತಾರೆ ಮತ್ತು ಇದರ ಪರಿಣಾಮವಾಗಿ ಅವರು ಸೂಕ್ತ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ. ಜೊತೆಗೆ ವೃತ್ತಿಪರ ಮೌಲ್ಯಮಾಪನ ಸಾಧನಗಳು ಲೈಂಗಿಕ ದೌರ್ಜನ್ಯಕ್ಕೆ ನಿರ್ದಿಷ್ಟವಾಗಿಲ್ಲ. ಸಹಾಯಾರ್ಥಿಗಳ ಸಹಕಾರದ ಆಧಾರದ ಮೇಲೆ ಲೈಂಗಿಕ ದೌರ್ಜನ್ಯವನ್ನು ಪತ್ತೆಹಚ್ಚುವ ಆಕ್ರಮಣಶೀಲವಲ್ಲದ (ದೇಹಕ್ಕೆ ಯಾವುದೇ ವೈದ್ಯಕೀಯ ಉಪಕರಣಗಳನ್ನು ಬಳಸದ) ಮೌಲ್ಯಮಾಪನ ರೂಪಿತ ವ್ಯವಸ್ಥೆಯನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ. ಈ ಮೌಲ್ಯಮಾಪನದ ವರದಿಯು ಇಂದಿನ ಚಿಕಿತ್ಸಾ ಪದ್ಧತಿಯಂತೆ ಕೇವಲ ಗುಣಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡದೆ ವೃತ್ತಿಪರರಿಗೆ ನಿರ್ಧಿಷ್ಟವಾಗಿ ಲೈಂಗಿಕ ದೌರ್ಜನ್ಯಕ್ಕೆ ಚಿಕಿತ್ಸೆಯನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ನಿಖರವಾದ ಅತಿ ಕೇಂದ್ರೀಕೃತವಾದ ಮತ್ತು ಸಂಕ್ಷಿಪ್ತವಾದ ಪತ್ತೆಯ ಸಾಧನ ಬಳಸಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಅಗತ್ಯವಾದ ಸಹಾಯವನ್ನು ಒದಗಿಸಲು, ಹಾಗೂ ವೃತ್ತಿಪರರಿಗೆ ಅಗತ್ಯವಾದ ನೆರವನ್ನು ನೀಡಲು ನಾವು ಬಯಸುತ್ತೇವೆ. ಈ ಉದ್ದೇಶಕ್ಕಾಗಿ ನೀವು ಅಥವಾ ನಿಮ್ಮ ಮಗುವು (ನಾಲ್ಕು ವರ್ಷಕ್ಕಿಂತಲೂ ಮೇಲ್ಪಟ್ಟ) ರಚಿಸಿದ ಸ್ವಯಂ ಚಿತ್ರಕಲೆಗಳನ್ನು ನೀಡಲು ನಿಮ್ಮ ಸಹಾಯ ನಮಗೆ ಅಗತ್ಯವಿದೆ. ನೀವು ನೀಡಿದ ಎಲ್ಲ ಮಾಹಿತಿಗಳನ್ನು ಅನಾಮದೇಯವಾಗಿ ಮತ್ತು ಗೌಪ್ಯವಾಗಿ ಇಡಲಾಗುವುದು ಹಾಗೂ ಈ ಸಾಧನೆಯನ್ನು ಸುಧಾರಿಸಲು ಮಾತ್ರ ಬಳಸಲಾಗುತ್ತದೆ.

ಹಾಗೂ ಈ ಸಾಧನೆಯನ್ನು ಭಾಗವಹಿಸಲು ನಿಮ್ಮ ಸಮಯವನ್ನು ವಿನಿಯೋಗಿಸಿದ್ದಕ್ಕಾಗಿ ಧನ್ಯವಾದಗಳು.
ಯಾವುದೇ ಪ್ರಶ್ನೆಗಳಿದ್ದಲ್ಲಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಲು ಹಿಂಜರಿಯಬೇಡಿ.
ಪ್ರೊಫೆಸರ್ ರೇಚೆಲ್ ಲೆವ್-ವೀಸೆಲ್ , rlev@univ.haifa.ac.il.

ಈ ಸುಧಾರಣಾ ಯೋಜನೆಯ ವ್ಯವಸ್ಥೆಯು ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ, ವೃತ್ತಿಪರರಿಗೆ ಮತ್ತು ಸಂಶೋಧನಾ ಸಮುದಾಯಕ್ಕೆ ಭರವಸೆಯ ನಿಹಿತಾರ್ಥಗಳನ್ನು ಒಳಗೊಂಡಿದೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ಈ ಯೋಜನೆಯಲ್ಲಿ ನಿಮ್ಮ ಆಸಕ್ತಿಯನ್ನು ನಾವು ಪ್ರಶಂಸಿಸುತ್ತೇವೆ ಹಾಗೂ ಸಮುದಾಯದ, ಸ್ವಯಂಸೇವಕರಿಲ್ಲದೆ ನಮ್ಮ ಉದ್ದೇಶವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಈ ಅಧ್ಯಯನದಲ್ಲಿ ನಿಮ್ಮ ಭಾಗವಹಿಸುವಿಕೆಯು ಸ್ವಯಂಪ್ರೇರಿತವಾಗಿರುತ್ತದೆ. ಈ ಅಧ್ಯಯನದಲ್ಲಿ ಭಾಗವಹಿಸುವುದು ಅಥವಾ ಇಲ್ಲದಿರುವುದನ್ನು ನೀವೇ ನಿರ್ಧರಿಸಬಹುದು. ಈ ಅಧ್ಯಯನದಲ್ಲಿ ಭಾಗವಹಿಸಲು ನೀವು ನಿರ್ಧರಿಸಿದಲ್ಲಿ, ಸಮ್ಮತಿ ಪತ್ರಕ್ಕೆ ಸಹಿ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಸಮ್ಮತಿ ಪತ್ರಕ್ಕೆ ಸಹಿ ಮಾಡಿದ ನಂತರವೂ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣವನ್ನು ನೀಡದೇ ಭಾಗವಹಿಸುವಿಕೆಯಿಂದ ಹಿಂದೆ ಸರಿಯಲು ನೀವು ಮುಕ್ತರಾಗಿರುತ್ತೀರಿ. ಈ ಅಧ್ಯಯನದಿಂದ ಹಿಂದೆ ಸರಿಯುವಿಕೆಯ ಕಾರಣದಿಂದ ಸಂಶೋಧಕರೊಂದಿಗೆ ನೀವು ಹೊಂದಿರುವ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಪ್ರಕ್ರಿಯೆಯ ಕೊನೆಯಲ್ಲಿ ನೀವು ಒಂದು ಬಳಕೆದಾರರ ಹೆಸರು (ಯೂಸರ್ ನೇಮ್) ಮತ್ತು ಒಂದು ರಹಸ್ಯ ಸಂಕೇತವನ್ನು (ಸೀಕ್ರೆಟ್ ಕೋಡ್) ಪಡೆಯುತ್ತೀರಿ. ಬಳಕೆದಾರರ ಹೆಸರು ಮತ್ತು ರಹಸ್ಯ ಸಂಕೇತಗಳು ಪ್ರತ್ಯೇಕ ಮಾಹಿತಿಗಳಾಗಿದ್ದು, ಅವು ನೀವು ಕಳುಹಿಸಿದ ಚಿತ್ರಕಲೆಗಳ ಆಧಾರದ ಮೇಲೆ ಅದರ ಫಲಿತಾಂಶಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತೇವೆ. ನೀವು ನಮ್ಮೊಂದಿಗೆ ಹೆಚ್ಚು ಚಿತ್ರಕಲೆಗಳನ್ನು ಹಂಚಿಕೊಂಡಂತೆಲ್ಲಾ ವ್ಯವಸ್ಥೆಯ ನಿಖರತೆಯನ್ನು ಹೆಚ್ಚಿಸುತ್ತದೆ. ಇಲ್ಲಿ ಒತ್ತಿಹೇಳಬೇಕಾದ ವಿಷಯವೇನೆಂದರೆ, ಈ ವಿಶ್ಲೇಷಣೆಯು ವೃತ್ತಿಪರರ ಅಭಿಪ್ರಾಯ ಮತ್ತು / ಅಥವಾ ಅಧಿಕೃತ ವೃತ್ತಿಪರರ ರೋಗನಿರ್ಣಯಕ್ಕೆ ಬದಲಿಯಾದುದಲ್ಲ.

1. ದಯವಿಟ್ಟು ರಹಸ್ಯ ಸಂಕೇತವನ್ನು ಸುರಕ್ಷಿತವಾಗಿರಿಸಿ, ಏಕೆಂದರೆ ಅದಿಲ್ಲದೆ ವಿಶ್ಲೇಷಣೆಯ ಹಿಮ್ಮಾಹಿತಿಯನ್ನು ಪ್ರದರ್ಶಿಸಲು ನಮಗೆ ಸಾಧ್ಯವಾಗುವುದಿಲ್ಲ. (ನಾವು ರಹಸ್ಯ ಸಂಕೇತದ ನ ನಕಲನ್ನು ಉಳಿಸಿಕೊಳ್ಳುವುದಿಲ್ಲ)
2. ಸಂಶೋಧನೆಯಲ್ಲಿ ಸಂಗ್ರಹಿಸಲಾದ ಎಲ್ಲ ದತ್ತಾಂಶಗಳನ್ನು ನಮ್ಮ ಡೇಟಾಬೇಸ್‍ಗಳಲ್ಲಿ ಶೇಖರಿಸಲಾಗುತ್ತದೆ ಮತ್ತು ಇದು

www.anima-ey.com / info@anima-ey.com
Professor Rachel Lev-Wiesel, rlev@univ.haifa.ac.il